ಕೃಷ್ಣಮಾಚಾರ್ಲು, ಸಿ ಆರ್
 	1888-1947. 1942 ರಿಂದ 1947ರವರೆಗೆ ಭಾರತ ಸರ್ಕಾರದ ಶಾಸನ ಇಲಾಖೆಯ ಮುಖ್ಯಾಧಿಕಾರಿಯಾಗಿದ್ದವರು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಗಂಗವರು ಗ್ರಾಮದಲ್ಲಿ ಜನ್ಮ ತಾಳಿದ ಕೃಷ್ಣಮಾಚಾರ್ಲು ಅವರು ಭಾರತ ಸರ್ಕಾರದ ಶಾಸನ ಇಲಾಖೆ ಸೇರಿ, ಎಚ್.ಕೃಷ್ಣಶಾಸ್ತ್ರಿಯವರ ಸಹಾಯಕರಾಗಿ ದುಡಿದರು. 1925ರಲ್ಲಿ ಆ ಇಲಾಖೆಯ ಸಗಾಯಕ ಸೂಪರಿಟೆಂಡೆಂಟರೂ 1931ರಲ್ಲಿ ಸೂಪರಿಂಟೆಂಡೆಂಟರೂ ಆಗಿ 1942ರಲ್ಲಿ ಆ ಇಲಾಖೆಯ ಮುಖ್ಯಾಧಿಕಾರಿಯಾದರು (ಗವರ್ನ್‍ಮೆಂಟ್ ಎಪಿಗ್ರಫಿಸ್ಟ್ ಫಾರ್ ಇಂಡಿಯ).

ಕೃಷ್ಣಮಾಚಾರ್ಲು ಅವರು ಸಂಸ್ಕøತ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಅಪಾರ ವಿದ್ವತ್ತನ್ನು ಗಳಿಸಿಕೊಂಡಿದ್ದರು. 1931ರಿಂದ ಅವರು ಸಂಪಾದಿಸುತ್ತಿದ್ದ ದಕ್ಷಿಣ ಭಾರತದ ಶಾಸನಗಳನ್ನು ಕುರಿತ ವಾರ್ಷಿಕ ವರದಿಗಳು(ಆನ್ಯುಯಲ್ ರಿಪೋಟ್ರ್ಸ್ ಆನ್ ಸೌತ್ ಇಂಡಿಯನ್ ಎಪಿಗ್ರಫಿ) ಅವರ ಭಾಷಾe್ಞÁನಕ್ಕೂ ಇತಿಹಾಸ ದೃಷ್ಟಿಗೂ ವಿಚಾರದಕ್ಷತೆಗೂ ನಿದರ್ಶನಗಳು. ಅವರು ಪಲ್ಲವರ ಇತಿಹಾಸಕ್ಕೆ ಆಧಾರವಸ್ತುಗಳಾದ ಅನೇಕ ತಾಮ್ರಶಾಸನಗಳನ್ನು ಪತ್ತೆ ಹಚ್ಚಿದರು. ಶಾಸನ ಇಲಾಖೆಯ ತ್ರೈಮಾಸಿಕವಾದ ಎಪಿಗ್ರಾಫಿಯ ಇಂಡಿಕಾದ ಪುಟಗಳಲ್ಲಿ ಪ್ರಕಟವಾಗಿರುವ 13 ಲೇಖನಗಳೂ ಕರ್ಣಾಟಕದ ನಾಗಾವಿಯ ಶಾಸನಗಳನ್ನು ಕುರಿತ (ಹೈದರಾಬಾದ್ ಆರ್ಕಿಯೊಲಾಜಿಕಲ್ ಸೀರೀಸ್, ನಂ.8) ಮತ್ತು ಕೊಪ್ಪಳದ ಶಾಸನಗಳ ಬಗೆಗಿನ (ಅದೇ ಮಾಲೆಯ ನಂ.12) ಪ್ರಬಂಧಗಳೂ ಅವರ ವಿದ್ವತ್ಪೂರ್ಣವೂ ಸಂಶೋಧನಾತ್ಮಕವೂ ಆದ ಕೃತಿಗಳ ಪೈಕಿ ಕೆಲವು.
ಸಂಶೋಧನ ಕ್ಷೇತ್ರದಲ್ಲಿ ಅವರು ಸಾಧಿಸಿದ ಪ್ರಗತಿಗೆ ಮೆಚ್ಚಿ ಅಂದಿನ ಬ್ರಿಟಿಷ್ ಸರ್ಕಾರ ಇವರಿಗೆ ರಾವ್ ಬಹದ್ದೂರ್ ಬಿರುದನ್ನು ನೀಡಿ ಗೌರವಿಸಿತು.                     						
 (ಕೆ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ